Well whatever I say about my book, might come out as bragging though its not ought to be. But since that is a common belief due to the societal condition, I thought to post a book review instead of me explaining the content and flow of the chapters. Way before I thought about it, Shridhar Uncle's review had reached my inbox. Being an author himself his take on any piece he pens becomes a masterpiece. Regardless of the subject matter, he treats anything with utmost respect and dedication while he dishes his write-ups which is a major take away for me also other fellow pen-magicians out there. Attached below is Mr. S L Shridhar's review of my book "Journey Under The Sky". Happy Reading!
"ತನ್ನ ತಂದೆಯ ದೇಶಪರ್ಯಟನೆಯ ಸಾಧನೆಯ(ಬೈಕ್ ನಲ್ಲಿ) ವಿಷಯ ವನ್ನು ಆಧರಿಸಿ ಬರೆದ ಪುಸ್ತಕ ಇದಾಗಿದ್ಧರೂ ಸಹ,ಬಹಳ ವಿಶೇಷ ವಿಷಯಗಳ ಬಗ್ಗೆ ಬೆಳಕು ಹರಿಸುತ್ತಾ ಓದುಗರಿಗೆ ಬೇಸರವಾಗದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುವಂತೆ ಬಹಳ ಸೊಗಸಾಗಿ ಕಾದಂಬರಿ ರಚಿಸಿದ್ಧಾಳೆ ಹೆಮ್ಮೆಯ ಕುವರಿ ಆಪ್ತಿ.ನಾನಂತೂ ಬೆಳಿಗ್ಗೆಯಿಂದ ಸಂಜೆ ಆರರ ವರೆಗೆ ಊಟ ತಿಂಡಿ ಗಳ ಪರಿವೆಯೇ ಇಲ್ಲದೆ ಓದಿಸಿಕೊಂಡು ಹೋದ ಕೃತಿ ಇದು. ತನ್ನ ತಂದೆಯ ಹೆಸರು,ಉದ್ಧೋಗ,ಊರು ಮುಂತಾದವುಗಳನ್ನು ಹೇಳುತ್ತಾ,ಇವರು ಇಂತಹ ವಾಹನದಲ್ಲಿ ಇಂತಹ ಸ್ಥಳಗಳಗೆ ಇಷ್ಟು ದಿನ ಹೋಗಿದ್ಧರು ಮುಂತಾಗಿ ಹತ್ತರಲ್ಲಿ ಹನ್ನೊಂದು ಎಂಬಂತೆ ನೀರಸವಾಗಿ ಬರೆಯದೇ ಬಹಳ ಸ್ವಾರಸ್ಯಕರವಾಗಿ ಕೌಶಲ್ಯ ಪೂರ್ಣವಾಗಿ ಬರಹಕ್ಕೆ ಆದಿ ಅಂತ್ಯ ಗಳನ್ನು ಬಹಳ ಚೆನ್ನಾಗಿ ಹೆಣೆದು ರೂಪುಕೊಟ್ಟು ಮುಗಿಸಿ,ಓದುಗರಿಗೆ ಓದಿದ ನಂತರ ಅಬ್ಬಾ ಎಂತಹ ಅದ್ಭುತ ಪುಸ್ತಕ ಓದಿದೆ ಎಂಬ ಸಾರ್ಥಕ ಭಾವ ಮೂಡುವಂತೆ ಹಾಗೂ,ಕೇವಲ ಹದಿನೇಳು ವರುಷದ ಈ ಹೆಣ್ಣುಮಗಳು ಇಷ್ಟು ಅದ್ಭುತ ಪುಸ್ತಕ ಬರೆಯಬಲ್ಲಳಾ ಎಂದು ಹುಬ್ಬೇರಿಸಿ ನಿಬ್ಬೆರಗಾಗುವಂತೆ ಮಾಡಿದ್ಧಾಳೆ.ಈ ಪುಸ್ತಕ ದಲ್ಲಿ ಪ್ರಕೃತಿ ಮಾತೆಯ ಸೌಂದರ್ಯದ ವರ್ಣನೆ ಇದೆ,ಸೈಕಲ್ ಕಲಿಕೆಯ ಉಪಯೋಗದ ಬಗ್ಗೆ ಮಾಹಿತಿ ಇದೆ, ಬೆಂಗಳೂರು ನಂತಹ ನಗರಗಳಲ್ಲಿ ಸಣ್ಣ ಉದ್ಧಿಮೆದಾರರು ತಮ್ಮ ಬದುಕು ಕಟ್ಟಿಕೊಳ್ಳಲು ಪಡುವ ಬವಣೆಗಳು ಕೆಲಸಗಾರರು ಮಾಡುವ ಮೋಸ,ಕೆಲಸಗಳ್ಳತನದಿಂದ ಹೇಗೆ ಕಂಪನಿಗಳು ಮುಚ್ಚಲಾಗುತ್ತದೆ ಎನ್ನುವುದರ ಚಿತ್ರಣ ಇದೆ.ಇದರ ಜೊತೆ ಜೊತೆಗೇ ಕೆಲವು ಹಾಸ್ಯಪ್ರಸಂಗಗಳೂ ಸಹ ಇದ್ದು ಓದುಗರ ಆಸಕ್ತಿ ಕೆರಳಿಸುತ್ತದೆ.ಅದರಲ್ಲಿ ಕೆಲವು ಪ್ರಸಂಗಗಳನ್ನು ಉದಾಹರಿಸುವುದಾದರೆ, ಕಿಶೋರ್ ರವರು ತಮ್ಮ ಬಂಧುವಿನ ಜೊತೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಬಾಯಲ್ಲಿ ದಾಳಿಂಬೆ ಬೀಜ ಇಟ್ಟುಕೊಂಡು ಇತ್ತ ಉಗಿಯಲೂ ಆಗದೇ ಅತ್ತ ನುಂಗಲೂ ಆಗದೆ ಪೇಚಿಗೆ ಸಿಲುಕಿದ ಪ್ರಸಂಗ, ಸೈಕಲ್ ಪೂರ್ಣವಾಗಿ ಕಲಿಯದೇ ಇದ್ಧರೂ ಸಹ physics professor ನ್ನು cycle ನಲ್ಲಿ ಕೂರಿಸಿಕೊಂಡು ಅವರ ಮನೆ ತಪಿಸಿದ ಪ್ರಸಂಗ,ಜಾತ್ರೆಯಲ್ಲಿ ಪಟಾಕಿಗಳನ್ನು ಸಿಡಿಸಿ ಬಟ್ಟೆ ಸುಟ್ಟ ಪ್ರಸಂಗ ಹೀಗೆ ಹತ್ತು ಹಲವನ್ನು ನೆನಪಿಸಿಕೊಳ್ಳಬಹುದು.ಈ ಮಾಹಿತಿಗಳೇ ಅಲ್ಲದೆ ಮುಂದುವರಿದು ಹೇಳುವುದಾದರೆ ಕಿಶೋರ್ ರವರು ಭೇಟಿ ಕೊಟ್ಟ ಎಲ್ಲ ಸ್ಥಳಗಳ ಮಾಹಿತಿ,ಅಲ್ಲಿನ ಸ್ಥಳಪುರಾಣ, ಸಸ್ಯಾಹಾರಿ ಪ್ರವಾಸಿಗರು ಸಸ್ಯಾಹಾರಿ ಊಟ ತಿಂಡಿಗಳ ಹುಡುಗಾಟಕ್ಕೆ ಪರೆದಾಡುವ ರೀತಿ,ಅವರು ಅನುಭವಿಸುವ ತೊಂದರೆಗಳು,ಬೇರೆ ಬೇರೆ ಪ್ರದೇಶಗಳಲ್ಲಿ ಈ ಇಬ್ಬರು ಪ್ರವಾಸಿಗರನ್ನು ಜನರು ಸಂಭ್ರಮದಿಂದ ಬರಮಾಡಿಕೊಂಡ ರೀತಿ ಹೀಗೆ ಎಲ್ಲವನ್ನೂ ಬಹಳ ಸೊಗಸಾಗಿ ತಾನೇ ಖುದ್ದಾಗಿ ಹೋಗಿ ಬಂದಂತೆ ಒಂದು ಸಣ್ಣ ಘಟನೆಯನ್ನೂ ಬಿಡದೆ ಬಹಳ ನೈಜವಾಗಿ ಚಿತ್ರಿಸಿದ್ದಾಳೆ.ತನ್ನ ತಂದೆ kishore ರವರ ಪ್ರತಿಯೊಂದು ಅಕ್ಷರಕ್ಕೂ ಅವರ ವ್ಯಕ್ತಿತ್ವದ ಗುಣಗಳನ್ನು ಹೊಂದಿಸಿ ಬರೆಯುತ್ತಾ ಪುಸ್ತಕ ಮುಗಿಸುವ ಹಂತಕ್ಕೆ ತಂದು ಆ ಗುಣಗಳೇ ಹೇಗೆ ಮುಂದೆ ಅವರು Blood2,Rainothan,Flagathon ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಸಹಕಾರಿಯಾಯಿತು ಎಂದು ವಿವರಿಸುತ್ತಾ ಓದುಗರಿಗೆ ತಾವೂ ಏಕೆ ಅಂತಹ ಚಟುವಟಿಕೆಗಳಲ್ಲಿ ಪಾಲುಗೊಳ್ಳಬಾರದು ಎಂಬ ಉತ್ಸಾಹ ಮೂಡುವಂತೆ ಸುಂದರವಾಗಿ ಆ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದ್ಧಾಳೆ.ಓದುತ್ತಾ ಓದುತ್ತಾ ಈ ಕೃತಿ ಹದಿನೇಳು ವರ್ಷದ ಹೆಣ್ಣು ಮಗಳು ಬರೆದ ಪುಸ್ತಕ ಎನಿಸದೆ ಬಹಳ ಪರಿಣಿತ,ಅನುಭವೀ ಬರಹಗಾರರ ಕೃತಿ ಎನ್ನುವಷ್ಟು ಪ್ರೌಢ ವಾಗಿದೆ.
ಕಾದಂಬರಿಯ ನಾಯಕ ತನ್ನ ತಂದೆ ಕಿಶೋರ್ ರವರು ಹುಟ್ಟಿದ ಊರು ಪ್ರಕೃತಿ ಮಾತೆಯ ರಮ್ಯ ತಾಣ ಪಶ್ಚಿಮಘಟ್ಟಗಳ ತಪ್ಪಲಿನ ಸುಂದರ ಪರಿಸರದ ಮುಂಡಾಜೆಯ ವರ್ಣನೆ,ಆ ಊರಿಗೆ ಆ ಹೆಸರು ಬರಲು ಕಾರಣ, ಆ ಊರಿನಲ್ಲಿ ಜನಸಿ ಪ್ರಸಿದ್ಧಿ ಪಡೆದಿರುವ ಮಹನೀಯರುಗಳು ,ಪೂರ್ವಜರ ಆಚಾರ ವಿಚಾರಗಳು,ಸಂಪ್ರದಾಯಗಳು, ಕಿಶೋರ್ ರವರ ಶಾಲೆ,ಅವರ ಬಾಲ್ಯದ ಸ್ನೇಹಿತರು,ಅಂದಿನ ತುಂಟಾಟಗಳು,ಅವರ ಅಂದಿನ ಹೀರೋತನ,ಆರ್ಥಿಕ ಬಡತನವಿದ್ದರೂ ಸಹ ಆಟ ಪಾಠ ಗಳು ತುಂಟಾಟಗಳ ಬಡತನ ಇಲ್ಲದೆ ಕಳೆದ ಸಂತಸದ ಕ್ಷಣಗಳು,ಕೇವಲ puc ಮುಗಿಸಿದ ಯುವಕ ತನ್ನ ತಂಗಿ ತಾಯಿಯರ ಜೊತೆ ಬೆಂಗಳೂರಿನಂತಹ ಶಹರಿಗೆ ಬರಲೇಬೇಕಾದ ಅನಿವಾರ್ಯತೆ,ಅಲ್ಲಿನ ಉಪವಾಸ ವನವಾಸಗಳು ಹಾಗೂ ಕಷ್ಟ ಕಾರ್ಪಣ್ಯಗಳ ನಡುವೆಯೇ ತನ್ನ ಬಾಲ್ಯದ ಕನಸಾಗಿದ್ಧ ಬೈಕ್ ನಲ್ಲಿ ದೇಶಪರ್ಯಟನೆಯನ್ನು ನನಸಾಗಿಸಿಕೊಂಡದ್ಧು ಎಲ್ಲವನ್ನೂ ಬಹಳ ರೋಚಕವಾಗಿ ಬರೆದಿದ್ಧಾಳೆ.ಬಹಳ ಅಲ್ಪ ಹಣದೊಂದಿಗೆ ಕಾಣದ ಊರು ವೈಭವೋಪೇತ ನಗರ ಬೆಂಗಳೂರಿಗೆ ಬಂದು ಬಹಳ ಪರಿಶ್ರಮಪಟ್ಟು ನೆಲೆನಿಂತು ಸ್ವಂತ ಮನೆ ಮಾಡಿ ಸುಖೀ ಜೀವನ ಕಟ್ಟಿಕೊಂಡು ಎಲ್ಲರ ಪ್ರಶಂಸೆಗೆ ಒಳಗಾಗಿ ತನ್ನಂತೆಯೇ ಬೇರೆಬೇರೆ ಊರುಗಳಿಂದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಯುವಕರಿಗೆ ದಾರಿದೀಪವಾಗಿ ತಮ್ಮ ಪಯಣದ ಅನುಭವದ ರಸಪಾಕಗಳನ್ನು ಉಣಬಡಿಸಿದ್ಧಾರೆ ಹಾಗೂ ಬಹಳ ಜನರಿಗೆ ಸಹಾಯ ಹಸ್ತ ನೀಡಿ ಅವರ ಜೀವನದ ಬೆಳಕಾಗಿದ್ಧಾರೆ.ಹಾಗಾಗಿ ಇಲ್ಲಿ ಕಿಶೋರ್ ರವರು ಒಬ್ಬ ಆದರ್ಶ ನಾಯಕರಾಗಿ ಹೊರಹೊಮ್ಮಿದ್ದಾರೆ......."
Link to purchase, "Journey Under The Sky"
ಎಸ್. ಎಲ್.ಶ್ರೀಧರ್
ಬೆಂಗಳೂರು
Comments
Post a Comment